ತುಮಕೂರಿನ ಕೊರಟಗೆರೆ ತಾಲ್ಲೂಕಿನ ಸಿದ್ಧರಬೆಟ್ಟ ಸುಕ್ಷೇತ್ರದಲ್ಲಿ ನಿನ್ನೆ ಜರುಗಿದ ಮಹಾಶಿವರಾತ್ರಿ ಜಾಗರಣೆಯಲ್ಲಿ ಪರಮಪೂಜ್ಯ ಮಠಾಧೀಶರುಗಳೊಂದಿಗೆ ಪಾಲ್ಗೊಂಡು, ಶಿವಾರಾಧನೆ ಮಾಡಲಾಯಿತು.ಶ್ರೀ ಬಾಳೆಹೊನ್ನೂರು ಖಾಸಾ ಶಾಖಾಮಠದ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಾರದೇಶ್ವರ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿಗಳು, ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನದ ಪರಮಪೂಜ್ಯರಾದ ಶ್ರೀ ಹನುಮಂತನಾಥ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ಸಚಿವರಾದ ವಿ.ಸೋಮಣ್ಣ, ಕನ್ನಡ ಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ ರವರು ಹಾಗೂ ಶಿವ ಶರಣರು, ಭಕ್ತಾಧಿಗಳು ಉಪಸ್ಥಿತರಿದ್ದರು.




